Kashaya Vana / Thambuli vana
Crafted from forest plants that thrive in the local climate, these special drinks are not just refreshing but also offer health benefits with valuable medicinal properties derived from the plants they include.
Few plants adaptable to arid climates are cultivated at our Manipal Academy of Higher Education, Bangaluru campus. A rare and valuable medicinal herb, among others, is being grown to raise awareness about their beneficial uses through "Rewilding MAHE BLR", a unique effort by environmentally conscious faculties here intended to bring native biodiversity to the campus and promote sustainable development.
As a component of this initiative, 155 individuals spread in twelve species have been planted on 26/01/2024 in the initial phase. This concept of vana serves as an example of unique efforts in bringing native diversity and nurturing indigenous plants suitable for dry deciduous forest. Below is a brief overview of the introduction and utilization of the plants planted in the initial phase.
ಪರಿಚಯ
ಕಷಾಯ ವನ/ತಂಬುಳಿ ವನ
ಕರ್ನಾಟಕದ ಮಲೆನಾಡಿನ ಮನೆ ಮನೆಗಳಲ್ಲಿ ನಿತ್ಯ ಬಳಕೆಯಲ್ಲಿರುವ ವಿಶೇಷ ಪಾನೀಯಗಳೆಂದರೆ ಕಷಾಯ ಹಾಗು ತಂಬುಳಿಗಳು. ಬಹುಶಹ ಈ ನೆಲಕ್ಕೆ ಇತಿಯೋಪಿಯಾದ ಕಾಫೀ, ಪೂರ್ವ ಏಷ್ಯಾದ ಚಹ ಬರುವುದಕ್ಕಿಂತ ಮೊದಲು, ಹಿಂದಿನ ಪೀಳಿಗೆಯ ಜನರ ವಿರಾಮದ ಪಾನೀಯಗಳು ಇವೇ ಆಗಿದ್ದವೋ ಏನೋ..? ವಾತಾವರಣಕ್ಕೆ ತಕ್ಕಂತೆ ಸದ್ವಿಕಾಸಗೊಂಡ ಕಾಡಿನ ಸಸ್ಯಗಳನ್ನು ಬಳಸಿ ಈ ವಿಶಿಷ್ಠ ಪಾನೀಯಗಳನ್ನು ತಯಾರಿಸಲಾಗುತ್ತದೆ. ಸಸ್ಯಗಳಿಂದ ಅಮೂಲ್ಯವಾದ ಔಷಧೀಯ ಗುಣಗಳು ಬಂದಿರುವುದರಿಂದ, ಈ ಪಾನೀಯಗಳೆಲ್ಲವೂ ಆರೋಗ್ಯಕರ. ಇವುಗಳಲ್ಲಿ ಹಲವು ಸಸ್ಯಗಳು ಶುಶ್ಕ ವಾತಾವರಣದಲ್ಲೂ ಬೆಳೆಯಬಲ್ಲದು ಮತ್ತು ಅವುಗಳ ಸದ್ಬಳಕೆಯ ಕುರಿತಾಗಿ ಜಾಗೃತಿ ಮೂಡಿಸುವು ಸಲುವಾಗಿ ನಮ್ಮ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಬೆಂಗಳೂರು ಆವರಣದಲ್ಲಿ, ಇಂತಹ ಅಪರೂಪದ, ಅಮೂಲ್ಯ ಔಷಧೀಯ ಸಸ್ಯ ಮೂಲಿಕೆಯನ್ನು ಬೆಳಸಲಾಗುತ್ತಿದೆ. ಕಾಲೇಜಿನ ಪರಿಸರದಲ್ಲಿ ಜೀವ ವೈವಿಧ್ಯತೆಯನ್ನು ತರುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು, ಇಲ್ಲಿನ ಕೆಲವು ಪರಿಸರಾಸಕ್ತ ಅಧ್ಯಾಪಕರು “ರಿ ವೈಲ್ಡಿಂಗ್” ಬಳಗದ ಮೂಲಕ ಈ ವಿಶಿಷ್ಠ ಪ್ರಯತ್ನವನ್ನು ರೂಪಿಸಿದ್ದಾರೆ. ಇದರ ಭಾಗವಾಗಿ ಮೊದಲಿನ ಹಂತದಲ್ಲಿ, ೧೨ ಪ್ರಭೇದಗಳ ೧೫೫ ಔಷಧೀಯ ಸಸ್ಯ ಮೂಲಿಕೆಯನ್ನು ನೆಡಾಲಾಗಿದ್ದು ಹಂತ ಹಂತವಾಗಿ ಇಲ್ಲಿನ ವಾತಾವರಣಕ್ಕೆ ಮತ್ತು ಇಲ್ಲಿರುವ ಶುಶ್ಕ ಎಲೆ ಉದುರುವ ಕಾಡಿನ ವಿಧಕ್ಕನುಗುಣವಾದ ವನ್ಯ ಸಸ್ಯಗಳನ್ನು ನೆಟ್ಟು, ಪೋಷಿಸುವ ಪರಿಸರಮುಖಿ ಕೆಲಸ ನಡೆಯಲಿಕ್ಕಿದೆ. ಮೊದಲನೇ ಹಂತದಲ್ಲಿ ನೆಟ್ಟ ಸಸ್ಯಗಳ ಪರಿಚಯ ಮತ್ತು ಅದರ ಸದ್ಬಳಕೆಯ ಕುರಿತಾದ ಕಿರು ವಿವರ ಇಲ್ಲಿ ನೀಡಲಾಗಿದೆ.